Tuesday, July 5, 2016

ನನ್ನವಳಿಗೆ - ಹುಟ್ಟು ಹಬ್ಬದ ಶುಭಾಶಯಗಳು




ನಂದಾ ದೀಪದ ಮೌನ ನನ್ನವಳ ಮಾತು
ತಂಗಾಳಿಯ ಸುಳಿದಾಟ ನನ್ನವಳ ನೋಟ 
ಬ್ರಹ್ಮಾನಂದ ನನ್ನವಳ ನಗುವು 
ನೀಲಾಕಾಶದ ಸೊಬಗು ನನ್ನವಳ ಚೆಲುವು






ಮೊದಲ ಮಳೆಯ ಉಲ್ಲಾಸ ನನ್ನವಳ ಮನಸು

ಸಿಹಿಯಾದ ರಸಪಾಕ ನನ್ನವಳ ಕೋಪ
ಜುಳು ಜುಳು ನೀರ ಕಲರವವು ನನ್ನವಳ ಕಂಠ
ನೀರಿನಲಿ ಮೀನಂತೆ ನನ್ನೊಡನೆ ಅವಳ ಒಡನಾಟ.












 











ಬಿರು ಬಿಸಿಲಲಿ ತನ್ನೆರಳು ನನ್ನವಳ ಸ್ನೇಹ
ಈ ಆತ್ಮಕ್ಕೆ ಸಂತೃಪ್ತಿ ನನ್ನವಳ ಪ್ರೇಮ
ನದಿ ಸಾಗರಕಿರುವ ನಂಟು ನನ್ನ-ಅವಳ ಬಂಧನ

ಹೇಳಿಮಾಡಿಸಿರುವನು ದೇವ ನನಗಾಗಿ ನನ್ನವಳನ
.