Friday, December 19, 2008

ಕಟುಕಿ

ಚಂದ್ರ ಹುಣ್ಣಿಮೆಯಂದು ಪುರ್ಣವಾಗಲೇ ಇಲ್ಲ
ನಿನ್ನ ಮಾತಿನಲ್ಲಿ ತಣ್ಣಗೆ ಮಿಂದ ನನಗೆ
ನಿನ್ನ ಮೌನ ಉರಿ ಆಯಿತಲ್ಲ
ಪ್ರಣಯವೇ ಅರಿಯದ ಕಟುಕಿಗೆ ನನ್ ಹೃದಯವ ಮಾರಿದೆನಲ್ಲ !!



ನದಿ ಕೋಟಿ ಮೈಲಿ ಹರಿದರೂ ಸಾಗರ್ ಸೇರಲೆಯಿಲ್ಲ
ನಿನ್ನ್ ಕಂಗಳಲಿ ಕನಸ ಕಂಡ ನನಗೆ
ನಿನ್ನ ನೋಟ ಕೊಲೆಪಾತಕವಾಯಿತಲ್ಲ
ಪ್ರಣಯವೇ ಅರಿಯದ ಕಟುಕಿಗೆ ನನ್ ಹೃದಯವ ಮಾರಿದೆನಲ್ಲ !!



ಸೂರ್ಯ ಉದಯಿಸಿ ಅಸ್ತಂಗತವಾಗಲೆಯಿಲ್ಲ
ನನ್ನುಸಿರಲಿ ಅಡಗಿದ ನಿನ್ನ ಎದೆಬಡಿತ
ನನ್ ಉಸಿರ ಗಟ್ಟಿಸಿತಲ್ಲ
ಪ್ರಣಯವೇ ಅರಿಯದ ಕಟುಕಿಗೆ ನನ್ ಹೃದಯವ ಮಾರಿದೆನಲ್ಲ !!


ಮಳೆ ಸುರಿಯಿತಾದರೂ ಭುವಿ ತಣಿಯಲೇ ಇಲ್ಲ
ನಿನ್ ಚೆಲುವಲಿ ಚಂದಿರ ಕಂಡವಗೆ
ಉಡುಗೊರೆಯಲಿ ಹಿಡಿ ಕೆಂಡವ ನೀಡಿದೆಯಲ್ಲ
ಪ್ರಣಯವೇ ಅರಿಯದ ಕಟುಕಿಗೆ ನನ್ ಹೃದಯವ ಮಾರಿದೆನಲ್ಲ !!

Sunday, December 7, 2008

ತಿಳಿಯ ಬೇಕಿದೆ


ಯಾರ ಮನ ಮನದಾ ಮುಡಿಪೋ?
ಯಾವ ಕಂಗಳ ಕನಸೋ ನನ್ ವಯಸು?
ಯಾವ ಕಿವಿಗಳ ಇಂಪು ಮಾತು?
ಯಾರ ಹೃದಯದ ಬಡಿತವೋ ನನ್ನುಸಿರು? ತಿಳಿಯ ಬೇಕಿದೆ

ಕಣ್ಣೋಟ ಯಾರಿಗೆ ಮಿಂಚೋ?
ನನ್ ನಗೆಯು ಯಾರಾ ನಲಿವೋ?
ನನ್ನ ತುಂಟಾಟ ಯಾರ ನಗೆಯೋ?
ಕಣ್ಣ್ ಸನ್ನೆ ಯಾರಿಗೆ ಒಲವೋ? ತಿಳಿಯ ಬೇಕಿದೆ

  ನನ್ನ ಓಟಕ್ಕೆ ಕನಸಲಿ ನಿಳುಕುವಳ್ಯಾರೋ ?
ನನ್ನ ವ್ಯಥೆಗೆ ಯಾರ್ ಕಣ್ ಹನಿಯೋ?
ಜೀವಕೆ ಸಂಜೀವಿನಿ ಯಾರೋ?
ಯಾರ್ ಶೋಕಗ್ನಿ ನನ್ನ ಚಿತೆಗೋ? ತಿಳಿಯ ಬೇಕಿದೆ