ಮನಸನು ಮಾರ್ಪಡಿಸಿ, ಕನಸುಗಳ ಕಲ್ಪನೆ ಕೊಟ್ಟು
ಚಿಂತಾರಹಿತನಾಗಿಸಿ , ನಿರ್ಭಯಗೊಳಿಸುವನೇ ಗುರು.
ಮನಸ್ಸಿಗೆ ಖುಷಿ ಕೊಟ್ಟು ,ಕನಸಿಗೆ ಗರಿ ಒದಗಿಸಿ
ಚಿಂತೆಗಳ ಪರಿಹರಿಸಿ , ಭಯವ ದೂರಾಗಿಸುವನೆ ಮಿತ್ರ .
ಮನಸ್ಸನೇ ಕದ್ದು, ಕನಸಾಗಿ ಕಾಣಿಸಿ
ಚಿಂತೆಗಳ ಕೊನೆಗಾಣಿಸಿ, ಭಯಕೆ ಎದೆ ಕೊಡಿಸುವವಳೇ ಪ್ರೇಯಸಿ.
ಮನಸ್ಸನು ನಿರ್ಮಿಸಿ, ನಮ್ಮನೆ ಕನಸೆಂದು ಬಗೆದು
ನಮ್ಮ ಚಿಂತೆಗಳ ಹೊತ್ತು , ಭಯವ ತಾಪಡುವವಳೇ ಹೆತ್ತ ತಾಯಿ.
