Thursday, April 9, 2009

ಚುನಾವಣೆ

ಬನ್ನಿ ಭಾರತೀಯರೆ ಪ್ರಜಾಪ್ರಭುತ್ವ ಮೆರೆಯುವಾ
ನೂರು ಕೋಟಿ ಮತವ ನೀಡಿ ನಾವಿಂದು ಜಯಿಸುವಾ

ಎಲ್ಲ ಜೀವಿಗಳಿಗೆ ಇಲ್ಲ ಈ ಒಂದು ಅವಸರ
ನಮಗೆ ಹಕ್ಕಾಗಿ ಸಿಕ್ಕಿದೆ ಎಂಬುದೆಷ್ಟು ಸುಮಧುರ

ಬೆಳೆಸೋಣ ನಾವು ಭಾರತಾಂಬೆಯ ಹೆಮ್ಮೆಯ
ಆರಿಸೋಣ ತಿಳಿದು ಸುಜನರ ನಮ್ಮೆಯ

ಭಾವಿ ಜೀವನ ಇದರ ಮೇಲೆ ನಿರ್ಭರ
ಮಾಡದಿರೆ ಧೃಡ ನಿರ್ಧಾರ ಆಗುವದು ಬರ್ಬರ

ಸುತ್ತುವರೆದ ಪಾಪಿ ರಾಷ್ಟ್ರಗಳ ಎದುರಿಸ ಬೇಕಿದೆ
ನಮ್ಮಲಿರುವ ದುಷ್ಟರ ದಮನವಾಗಬೇಕಿದೆ

ನಾವು ಭಾರತೀಯರೆಂದು ವಿಶ್ವ ಗೌರವಿಸುವುದು
ನನ್ನ ಹಿಂದೆ ನೂರು ಕೋಟಿ ಜನ ಇರುವರೆಂದು ತಿಳಿವುದು

ಜಾತಿ ಮತ ಪಂಥ ಕಿಂತ ದೇಶ ದೊಡ್ಡದಿರುವುದು
ಅದಿಲ್ಲದಿದ್ದರೆ ಹಮ್ಮೆಯೇ ನಮಗುಳಿಯದು


ಯಾರನ್ನೇ ಆರಿಸೋಣ ನಾವು
ಆದರೆ, ಭಾರತಾಂಬೆಯೇ ಜಯಿಸಲಿ.