Tuesday, March 17, 2009

ನಿತ್ಯ - ಸತ್ಯ

ತಂದೆ ತಾಯಿ ಕೊನೆವರೆಗೆ ಉಳಿಯುವರಲ್ಲ,
ಮಡದಿ ಮಕ್ಕಳು ಕೊನೆಯಲಿ ಜೊತೆ ಹೊರಡುವವರಲ್ಲ.

ಬುದ್ಧಿ ಅರವತ್ತಾದರೆ ಇರುವದಿಲ್ಲ,
ಮುದಿತನದಿ ಶುದ್ಧಿ ಬಳಿ ಸುಳಿಯುವದಿಲ್ಲ.

ಮುಪ್ಪಿನ ನೀರಿಗೆಯಲಿ ಸೌಂದರ್ಯ ಅಡಗುವದಲ್ಲ,
ಕಷ್ಟದ ಮಡುವಿನಲಿ ಬಿದ್ದು ಸೊಕ್ಕು ಮುರಿಯುವುದಲ್ಲ.

ಜೀವ ತೆಯ್ದಂತೆ ಜೀವದ ಆಸೆ ಬಲಿಯುವುದಲ್ಲ
ರೋಗ ರುಜಿನಗಳ ಸರಮಾಲೆ ಬಿಡದೆ ಬೆಳೆಯುವುದಲ್ಲ.

ಸುಖ ಪಟ್ಟೆ ಎಮ್ಬುದು ಬರಿ ನೆನಪಾಗಿ ಉಳಿಯುವುದಲ್ಲ.
ಕಷ್ಟವ ಮರೆಯಲು ಆಗುವದಿಲ್ಲ, ನಿರಂತರ ಜೊತೆ ಇರುವುದಲ್ಲ.

ಹೂಳು, ಕೊಳ್ಳಿ ಇಡು, ಬಿಡು; ದೇಹ ನಶಿಸುವದಲ್ಲ,
ದೇಹ ನಡೆಸಿದ ಚೈತನ್ಯ ಏನು, ಏನಾಯಿತು ತಿಳಿಯುವುದಿಲ್ಲ .

1 comment:

Unknown said...

Manoj SIr 100% correct ri....

But only thing is that we wont think that we wont be having it in future