Tuesday, November 4, 2008

ಮನಸ್ಸಿಗೆ ಸಾಟಿಯೇ ನೀ ಹಕ್ಕಿ ???


ಸುಂದರ ಈ ಮನಸು ,ಬಿಚಿಟ್ಟರೆ ಹೊಂಗನಸು.
ಹಾರಾಡುವ ಹಕ್ಕಿ ಈ ಮನಸ್ಸು ರೆಕ್ಕೆ ಇಲ್ಲದಿದ್ದರೂ ಎಷ್ಟು ಸೊಗಸು ??

ಕೂರುವುದು ಸೊಂಪಾದ ಕೊಂಬೆಯಮೇಲೆ ಕೆಲಹೊತ್ತು,
ಕೊಂಬೆ ಆಗಿರಬಹುದು ಕನಸು, ಇಲ್ಲ ಮತ್ತೊಂದು ಮನಸು .
ಹಕ್ಕಿಗೆ ಇರುವುದು ಪರಿಮಿತಿ ಇಂತಿಷ್ಟು,
ಮನಸ್ಸೇ ಅಪರಿಮಿತ , ವೇಗ ಸಾಟಿ ಇಲ್ಲದಷ್ಟು .

ಹಕ್ಕಿಗೆ ದೃಷ್ಟಿ ತಾ ಎತ್ತರ ಹಾರಿದಷ್ಟು,
ದೃಷ್ಟಿ ಕೋನಕ್ಕೆ ಮನದ ಕೊಡುಗೆ ಸಾಕಷ್ಟು .
ಹಕ್ಕಿಗೋ ಹಾರಲಾಗುವುದಿಲ್ಲ ಎಲ್ಲ ಹೊತ್ತು ,
ಸುಮ್ಮನೆ ಕೂರೋಲ್ಲ ಈ ಮನಸ್ಸು ಯಾವೊತ್ತು .

ಹಕ್ಕಿಗೆ ಇರಬಹುದು ಪಂಜರದ ಭಯ ಸಾಕಷ್ಟು ,ದೇವರೇ ಮಾತ್ರ ಬಂಧಿಸಬಲ್ಲನು ಈ ಮನಸ್ಸಿಗೆಷ್ಟು .??
ಗರಿಗಳಿಗಿಂತ ಹೆಚ್ಹು ಮನಸ್ಸಿನ ಬಣ್ಣಗಳ ಗಮ್ಮತ್ತು, ಅನುಭವಿಕರಗೇ ಗೊತ್ತು ಮನಸ್ಸಿನ ಮಹಿಮೆ ಎಷ್ಟು ..

1 comment:

Twenty 20 Cricket England 09 said...

Hi Manoj,
Too good..
Bahal adbhutavaada Kalpane.
Keep writing :)